ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರದ ಬ್ರಾಸಂ ಸಭಾಭವನದಲ್ಲಿ ಭಾನುವಾರ ( ಡಿ.15) ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಒಲೆರಹಿತ ಅಡುಗೆ ಸ್ಪರ್ಧೆ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಲೇಖಕಿ ಡಾ.ಶುಭಾ ಮರವಂತೆ ‘ಜೀವನ ಪ್ರೀತಿ- ಹೊಸ ದಾರಿ’ ಕುರಿತು ಮಾತನಾಡಿದರು. ಜೀವನ್ಮುಖಿ ಸಂಸ್ಥೆ ಮಹಿಳೆಯರು ಚೌಡಿಕೆ ಕುಣಿತ ಪ್ರದರ್ಶಿಸಿದರು. ಸ್ಪರ್ಧಿಗಳಿಗೆ ಬಹುಮಾನ ವಿತರಣೆ ನಡೆಯಿತು. ‘ಚರಕ’ದ ಅಧ್ಯಕ್ಷರಾದ ಗೌರಮ್ಮ, ಜೀವನ್ಮುಖಿ ಸಂಸ್ಥೆಯ ಚೂಡಾಮಣಿ ರಾಮಚಂದ್ರ, ಎಂ.ವಿ. ಪ್ರತಿಭಾ, ಚರಕದ ಪದ್ಮಶ್ರೀ ಉಪಸ್ಥಿತರಿದ್ದರು.