ಚರಕದ ಶ್ರಮಜೀವಿ ಆಶ್ರಮದಲ್ಲಿ ಸೆಪ್ಟೆಂಬರ್ 25 ರಂದು ಬುಧವಾರ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ನಿಯಮಿತ ಮತ್ತು ಚರಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ 2024 ನೇ ಮಾರ್ಚ್ 31 ಕ್ಕೆ ಕೊನೆಗೊಂಡ 2023-2024 ನೇ ಸಾಲಿನ ಚರಕದ ಉತ್ಪಾದನಾ, ಮಾರಾಟ ಮತ್ತು ಲಾಭ- ನಷ್ಟದ ಲೆಕ್ಕಾಚಾರವನ್ನು ಮಂಡಿಸಲಾಯಿತು. ಹಾಗೆಯೇ, ಸೌಹಾರ್ದದ ಲಾಭ- ನಷ್ಟದ ಲೆಕ್ಕಾಚಾರವನ್ನೂ ಸಭೆಯ ಮುಂದಿಡಲಾಯಿತು.

ಅಲ್ಲದೇ, 2024 – 2025 ನೇ ಸಾಲಿನ ಅಂದಾಜು ಆಯ – ವ್ಯಯವನ್ನು ಸಭೆಯಲ್ಲಿ ಅನುಮೋದಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಚರಕದ ಅಧ್ಯಕ್ಷೆ  ಗೌರಮ್ಮ, ಸೌಹಾರ್ದದ ಅಧ್ಯಕ್ಷೆ ಚಂದ್ರಕಲಾ ವಹಿಸಿದ್ದರು. ಚರಕದ ಕಾರ್ಯದರ್ಶಿ ಎನ್. ರಮೇಶ್ ವರದಿ ಮಂಡಿಸಿದರು. ಸೌಹಾರ್ದದ ವರದಿಯನ್ನು ಲೆಕ್ಕ ಸಹಾಯಕರಾದ ಎಂ. ನಾಗರತ್ನ ಮಂಡಿಸಿದರು. ಚರಕದ ಸಿಇಒ ಟೆರೆನ್ಸ್ ಪೀಟರ್, ಉಪಾಧ್ಯಕ್ಷೆ ಮಹಾಲಕ್ಷ್ಮೀ, ಚರಕ ಹಾಗೂ ಸೌಹಾರ್ದದ ಪದಾಧಿಕಾರಿಗಳು  ಉಪಸ್ಥಿತರಿದ್ದರು.