ಪಿಎಫ್, ಇಎಸ್ಐ ಬಗ್ಗೆ ಮಾಹಿತಿ ಅರಿವು ಕಾರ್ಯಾಗಾರ

ಪಿಎಫ್, ಇಎಸ್ಐ ಬಗ್ಗೆ ಮಾಹಿತಿ ಅರಿವು ಕಾರ್ಯಾಗಾರ

ಚರಕದಲ್ಲಿ  ಡಿಸೆಂಬರ್ 2024, 27 ರಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಹಾಗೂ ಕಾರ್ಮಿಕರ ರಾಜ್ಯ ವಿಮಾ ನಿಗಮ ಜಂಟಿಯಾಗಿ ಮಾಹಿತಿ ಅರಿವು ಕಾರ್ಯಾಗಾರ ಹಮ್ಮಿಕೊಂಡಿದ್ದವು. ಭವಿಷ್ಯ ನಿಧಿ (ಪಿಎಫ್), ಪಿಂಚಣಿಗಳ ಪ್ರಯೋಜನ, ನೋಂದಣಿ ಪ್ರಕ್ರಿಯೆ ಕುರಿತಂತೆ ಪಿ.ಎಫ್ ಇಲಾಖೆಯ ವಲಯ ವ್ಯವಸ್ಥಾಪಕ ಧೀರೇಂದ್ರ ಅವರು ಮಾಹಿತಿ ನೀಡಿದರು....
ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ

ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ

ಜೀವನ್ಮುಖಿ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮ ಸಾಗರದ ಬ್ರಾಸಂ ಸಭಾಭವನದಲ್ಲಿ ಭಾನುವಾರ ( ಡಿ.15) ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಒಲೆರಹಿತ ಅಡುಗೆ ಸ್ಪರ್ಧೆ, ಉಪನ್ಯಾಸ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಲೇಖಕಿ ಡಾ.ಶುಭಾ ಮರವಂತೆ ‘ಜೀವನ ಪ್ರೀತಿ- ಹೊಸ ದಾರಿ’ ಕುರಿತು...
‘ಚರಕ’ ಭೀಮನಕೋಣೆ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ, ಬಟ್ಟೆಮಲ್ಲಪ್ಪ ಜಂಟಿಯಾಗಿ ಕಸೂತಿ ಮತ್ತು ಕೌದಿ ಹೊಲಿಗೆ ಕಾರ್ಯಾಗಾರ ‘ಕುಸುರಿ’ ಆಯೋಜಿಸಲಾಗಿತ್ತು.

‘ಚರಕ’ ಭೀಮನಕೋಣೆ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ, ಬಟ್ಟೆಮಲ್ಲಪ್ಪ ಜಂಟಿಯಾಗಿ ಕಸೂತಿ ಮತ್ತು ಕೌದಿ ಹೊಲಿಗೆ ಕಾರ್ಯಾಗಾರ ‘ಕುಸುರಿ’ ಆಯೋಜಿಸಲಾಗಿತ್ತು.

ಮೂರು ದಿನಗಳ ಈ ಕಾರ್ಯಾಗಾರವನ್ನು ಮಂಗಳವಾರ ಚರಕದ ಸಿಇಒ ಟೆರೆನ್ಸ್ ಪೀಟರ್ ಬಟ್ಟೆಗೆ ಟಾಕ ಹಾಕುವ ಮೂಲಕ ಉದ್ಘಾಟಿಸಿದರು. ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೀಟರ್ ಅವರು ಸಲಹೆ ನೀಡಿದರು. ಸಾರ ಸಂಸ್ಥೆ ಸ್ಥಾಪಕರೂ, ಚಿತ್ರಕಲಾವಿದರೂ ಆದ...
ನೇಕಾರರಿಗೆ ಬೋನಸ್‌ ವಿತರಣೆ

ನೇಕಾರರಿಗೆ ಬೋನಸ್‌ ವಿತರಣೆ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ ಭೀಮನಕೋಣೆಯಿಂದ ಈಚೆಗೆ ನೇಕಾರರಿಗೆ ಈ ಸಾಲಿನ ಬೋನಸ್‌ ವಿತರಿಸಲಾಯಿತು. ಬೋನಸ್‌ ಸ್ವೀಕರಿಸಿದ ನೇಕಾರರು ಹರ್ಷ ವ್ಯಕ್ತಪಡಿಸಿದರು. ನೇಕಾರರಿರುವ ಸ್ಥಳಗಳಿಗೇ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಅವರ ಅಹವಾಲುಗಳನ್ನೂ ಇದೇ ಸಂದರ್ಭದಲ್ಲಿ ಆಲಿಸಿದರು. ಗದುಗಿನ ಬೆಟಗೇರಿಯ ನರಸಪೂರದ ಶ್ರೀ...