ಮೂರು ದಿನಗಳ ಈ ಕಾರ್ಯಾಗಾರವನ್ನು ಮಂಗಳವಾರ ಚರಕದ ಸಿಇಒ ಟೆರೆನ್ಸ್ ಪೀಟರ್ ಬಟ್ಟೆಗೆ ಟಾಕ ಹಾಕುವ ಮೂಲಕ ಉದ್ಘಾಟಿಸಿದರು.

ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಕಾರ್ಯಾಗಾರವನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪೀಟರ್ ಅವರು ಸಲಹೆ ನೀಡಿದರು. ಸಾರ ಸಂಸ್ಥೆ ಸ್ಥಾಪಕರೂ, ಚಿತ್ರಕಲಾವಿದರೂ ಆದ ಅರುಣ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

‘ ಚರಕ’ದ ಮಹಾಲಕ್ಷ್ಮಿ, ವಿನ್ಯಾಸ ವಿಭಾಗದ ಮುಖ್ಯಸ್ಥೆ ಪದ್ಮಶ್ರೀ, ಮಾರಾಟ ವಿಭಾಗದ ಮುಖ್ಯಸ್ಥ ಕೃಷ್ಣ, ಸಾರ ಸಂಸ್ಥೆಯ ಧನುಷ್ ಅವರೂ ಹಾಜರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಚರಕದ ಸತ್ಯವತಿ, ಚಿತ್ರ ಹೆಗಡೆ, ಪ್ರೀತಿ ಅಂಗಡಿ ತರಬೇತಿ ನೀಡಿದರು.

ಶಿಬಿರಾರ್ಥಿಗಳಾಗಿ 25 ಮಹಿಳೆಯರು ಭಾಗವಹಿಸಿದ್ದರು.

ಕವಿ- ಕಾವ್ಯ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.