ಚರಕದಲ್ಲಿ ಡಿಸೆಂಬರ್ 2024, 27 ರಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಹಾಗೂ ಕಾರ್ಮಿಕರ ರಾಜ್ಯ ವಿಮಾ ನಿಗಮ ಜಂಟಿಯಾಗಿ ಮಾಹಿತಿ ಅರಿವು ಕಾರ್ಯಾಗಾರ ಹಮ್ಮಿಕೊಂಡಿದ್ದವು.
ಭವಿಷ್ಯ ನಿಧಿ (ಪಿಎಫ್), ಪಿಂಚಣಿಗಳ ಪ್ರಯೋಜನ, ನೋಂದಣಿ ಪ್ರಕ್ರಿಯೆ ಕುರಿತಂತೆ ಪಿ.ಎಫ್ ಇಲಾಖೆಯ ವಲಯ ವ್ಯವಸ್ಥಾಪಕ ಧೀರೇಂದ್ರ ಅವರು ಮಾಹಿತಿ ನೀಡಿದರು. ಭವಿಷ್ಯ ನಿಧಿ ಕುರಿತ ಪ್ರಶ್ನೆಗಳಿಗೆ ಇಲಾಖೆಯ ಹಿರಿಯ ಸಹಾಯಕ ಧರಣೇಶ್ ಉತ್ತರಿಸಿದರು.
ಇಎಸ್ಐ ಕುರಿತಂತೆ ವಿಮಾ ನಿಗಮದ ವಿಭಾಗೀಯ ವ್ಯವಸ್ಥಾಪಕಿ ಆಶಾದೇವಿ ವಿವರವಾದ ಮಾಹಿತಿ ಒದಗಿಸಿದರು. ಚರಕದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ರಮೇಶ್, ಸಿಇಒ ಟೆರೆನ್ಸ್ ಪೀಟರ್ ಉಪಸ್ಥಿತರಿದ್ದರು.