ಸಾಗರದಲ್ಲಿ ಚರಕ ಸಂಸ್ಥೆಯಿಂದ ವಿಲಿಯಂ ಅವರಿಗೆ ಗುರುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಸಾಹಿತಿ ನಾ.ಡಿಸೋಜ, ಪ್ರಸನ್ನ, ಎಂ.ಪಿ.ಲಕ್ಷ್ಮೀನಾರಾಯಣ್, ಎಂ.ಖಾಸಿಂ, ಶಿವಾನಂದ ಕುಗ್ವೆ ಭಾಗವಹಿಸಿದ್ದರು.
‘ಬರಹಗಾರನಾಗಿ ಸಾಮಾನ್ಯರಲ್ಲಿನ ಅಸಮಾನ್ಯತೆಯನ್ನು ಗುರುತಿಸಿದ್ದು ಲೇಖಕ ವಿಲಿಯಂ ಅವರ ವಿಶೇಷತೆಯಾಗಿತ್ತು’ ಎಂದು ಸಾಹಿತಿ ನಾ.ಡಿಸೋಜ ಹೇಳಿದರು..
ಅಗಲಿದ ಲೇಖಕ ವಿಲಿಯಂ ಅವರಿಗೆ ಚರಕ ಸಂಸ್ಥೆ ಗುರುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಓರ್ವ ಶಿಕ್ಷಕ ಹೇಗಿರಬೇಕು ಎಂಬುದಕ್ಕೆ ಮಾದರಿಯಂತೆ ಬದುಕಿದವರು ವಿಲಿಯಂ’ ಎಂದು ಹೇಳಿದರು.
‘ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸಿ ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂಬ ಸುದ್ದಿ ಮುನ್ನೆಲೆಗೆ ಬಂದಾಗ ಅದರ ವಿರುದ್ಧ ಹೋರಾಟ ರೂಪಿಸಿದ ಪ್ರಮುಖರಲ್ಲಿ ವಿಲಿಯಂ ಕೂಡ ಒಬ್ಬರು. ಇಂತಹ ಅನೇಕ ಜನಪರ ಹೋರಾಟಗಳಲ್ಲಿ ಊರಿನ ಧ್ವನಿಯಾಗಿ ಮುಂಚೂಣಿಯಲ್ಲಿದ್ದದ್ದು ವಿಲಿಯಂ ಅವರ ಹೆಗ್ಗಳಿಕೆ’ ಎಂದರು.
ಪ್ರಮುಖರಾದ ಶಿವಾನಂದ ಕುಗ್ವೆ, ಎಸ್.ಎಂ.ಗಣಪತಿ, ಕುಮಾರಸ್ವಾಮಿ, ಜಿ.ಯೋಗಿಶ್, ಡಾ.ಬಿ.ಜಿ.ಸಂಗಂ, ಎಂ.ವಿ.ಪ್ರತಿಭಾ ಮಾತನಾಡಿದರು. ಚರಕ ಸಂಸ್ಥೆಯ ರಮೇಶ್, ಪದ್ಮಶ್ರೀ, ಪೀಟರ್, ಮಹಾಲಕ್ಷ್ಮಿ, ದೇಸಿ ಸಂಸ್ಥೆಯ
ಕೃಷ್ಣ ಇದ್ದರು.